ದಶಮಾನೋತ್ಸವ ವಿಶೇಷ ಕಾರ್ಯಕ್ರಮ

ಶ್ರೀ ಭಾರತಿ ಕಾಲೇಜಿನಲ್ಲಿ ಆರ್ಷವಿದ್ಯೆಯ ಅಧ್ಯಯನಕ್ಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆಧುನಿಕ ವೃತ್ತಿ, ಪ್ರವೃತ್ತಿಯಲ್ಲಿರುವವರಿಗೆ ಇದೊಂದು ಸದವಕಾಶ. ಕಾಲೇಜಿನ ವಿದ್ಯಾರ್ಥಿಗಳಿಗೂ ವೇದ-ಸಂಸ್ಕಾರಗಳ ಅಧ್ಯಯನವಾಗಬೇಕೆಂಬುದೂ ಸದುದ್ದೇಶ. ಮಾತ್ರವಲ್ಲ, ಉನ್ನತ ಅಧ್ಯಯನ ಹಾಗೂ ಸಂಶೋಧನಕ್ಕೂ ಅವಕಾಶವಿರಬೇಕು ಎಂಬ ಹೆಬ್ಬಯಕೆಯೊಂದಿಗೆ ಈ ವೇದ-ವಿದ್ಯಾ ಸಂಸ್ಕಾರ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಶ್ರೀ ರಾಮಚಂದ್ರಾಪುರ ಮಠದ ಪೀಠಾಧೀಶರಾದ ಪೂಜ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಪ್ರೇರಣೆಯಂತೆ ದಿನಾಂಕ 20-04-2012ರಂದು ಉದ್ಘಾಟಿಸಲ್ಪಟ್ಟಿತು. ಈ ಕೇಂದ್ರದ ಅಧೀನದಲ್ಲಿ ವೇದ-ವಿದ್ಯಾ ಡಿಪ್ಲೋಮಾ ಕೋರ್ಸ್‌ನ್ನು ಈಗಾಗಲೇ ಆರಂಭಿಸಲಾಗಿದೆ. ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಸಂಶೋಧನಾ ಕೇಂದ್ರವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಡಿಸಲು ವಿಶವಿದ್ಯಾನಿಲಯದ ಅನುಮತಿಗಾಗಿ ಬರೆಯಲಾಗಿದೆ. ವೇದ ವಿದ್ಯಾ ಡಿಪ್ಲೊಮಾ ಕೋರ್ಸಿನ ವಿದ್ಯಾರ್ಥಿಗಳಿಗೆ, ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಇತರ ಆಸಕ್ತ ಸಾರ್ವಜನಿಕರಿಗೆ ನಮ್ಮ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುವ ಉದ್ದೇಶದಿಂದ ಸಂಶೋಧನಾ ಕೇಂದ್ರವು ರಾಮಾಯಣ, ಮಹಾಭಾರತ, ಪುರಾಣಗಳು, ಧರ್ಮಶಾಸ್ತ್ರ ಮತ್ತು ವೇದಾಂತ ವಿಷಯದ ಮೇಲೆ ಗೋಷ್ಠಿಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಶ್ರೀ ಭಾರತಿ ಕಾಲೇಜಿನಲ್ಲಿ ನಡೆಯಲಿದೆ. ಪ್ರತೀ ಗೋಷ್ಠಿಗೆ  ರೂ 200/- ಪ್ರವೇಶ ಶುಲ್ಕವಿದ್ದು  ಆಸಕ್ತರು ಆದಷ್ಟು ಬೇಗನೆ ಹೆಸರನ್ನು ನೊಂದಾಯಿಸಲು ಕೋರಲಾಗಿದೆ. ಪ್ರತೀ ಗೋಷ್ಠಿಗೆ ರೂ 200ರಂತೆ ಎಲ್ಲಾ ಗೋಷ್ಠಿಗಳಿಗೂ ಏಕಕಾಲಕ್ಕೆ ನೊಂದಾಯಿಸಬಹುದು.  ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಲು ಇಚ್ಛಿಸುವವರು ತಮ್ಮ ಪ್ರಬಂಧಗಳನ್ನು ನಿರ್ದೇಶಕರು ವೇದ-ವಿದ್ಯಾ ಸಂಸ್ಕಾರ ಸಂಶೋಧನಾ ಕೇಂದ್ರ, ಶ್ರೀ ಭಾರತಿ ಕಾಲೇಜು, ವಿವೇಕಾನಂದ ರಸ್ತೆ, 6ನೇ ಅಡ್ದ ರಸ್ತೆ, ನಂತೂರು ಪದವು, ಮಂಗಳೂರು ಇವರಿಗೆ ಮುಂಚಿತವಾಗಿ ಕಳುಹಿಸಿಕೊಡಬೇಕೆಂದು ಕೋರಲಾಗಿದೆ. ಪರಿಶೀಲನಾ ಸಮಿತಿಯು ಪ್ರಬಂಧಗಳನ್ನು ಪರಿಶೀಲಿಸಿದ ನಂತರ ಗೋಷ್ಠಿಗಳಲ್ಲಿ ಆಯ್ದ ಪ್ರಬಂಧಗಳ ಮಂಡನೆಗೆ ಅವಕಾಶವಿರುತ್ತದೆ.

ಗೋಷ್ಠಿಗಳು ಡಿಸೆಂಬರ್ ಮತ್ತು ಜನವರಿ ತಿಂಗಳಿನ ಪ್ರತೀ ಶನಿವಾರ ಮಧ್ಯಾಹ್ನ 2:00 ಗಂಟೆಯಿಂದ 5:00 ಗಂಟೆಯವರೆಗೆ ಮತ್ತು ಆದಿತ್ಯವಾರ ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ನಡೆಯಲಿದೆ.

ಗೋಷ್ಠಿಗಳ ವಿವರ:

ದಿನಾಂಕ:  08-12-2012 ಮತ್ತು 09-12-2012    ವಾಲ್ಮೀಕಿ ವಿರಚಿತ ಶ್ರೀಮದ್ರಾಮಾಯಣಮ್

1. ರಾಮಾಯಣದ ಕಾಲ, ದೇಶ ಮತ್ತು ಗ್ರಂಥ ಪರಿಚಯ
2. ರಾಮಾಯಣ ಕಾಲೀನ ಸಂಸ್ಕೃತಿ
3. ರಾಮಾಯಣದ ಪರಂಪರೆ
4. ವಾಲ್ಮೀಕಿ ಚಿತ್ರಿಸಿದ ಸೀತಾರಾಮ
5. ಶ್ರೀಮದ್ರಾಮಾಯಣ ನಿರೂಪಿತ ಶಾಶ್ವತ ಮೌಲ್ಯಗಳು

ದಿನಾಂಕ:  15-12-2012 ಮತ್ತು 16-12-2012    ವ್ಯಾಸ ವಿರಚಿತ ಶ್ರೀಮನ್ಮಹಾಭಾರತಮ್

1. ವ್ಯಾಸ ವಿರಚಿತ ಮಹಾಭಾರತದ ಕಾಲ, ದೇಶ ಮತ್ತು ಗ್ರಂಥಪರಿಚಯ
2. ಮಹಾಭಾರತದಲ್ಲಿ ನಿರೂಪಿತ ರಾಜನೀತಿ
3. ಮಹಾಭಾರತದ ಪಾತ್ರಗಳು
4. ಮಹಾಭಾರತದ ಪರಂಪರೆ ಮತ್ತು ಪ್ರಭಾವ
5. ಮಹಾಭಾರತದ ಕಷ್ಟಕರ ಪ್ರಸಂಗಗಳು

ದಿನಾಂಕ:  22-12-2012 ಮತ್ತು 23-12-2012    ಪುರಾಣ

1. ಅಷ್ಟಾದಶ ಪುರಾಣಗಳ ಸಂಕ್ಷಿಪ್ತ ಪರಿಚಯ
2. ಪುರಾಣಗಳಲ್ಲಿ ವ್ರತಗಳು, ಪೂಜೆಗಳು ಮತ್ತು ಹಬ್ಬಗಳು
3. ಪುರಾಣಗಳಲ್ಲಿ ಭಾರತೀಯ ಧರ್ಮ
4. ಪುರಾಣಗಳ ಪರಂಪರೆ ಮತ್ತು ಪ್ರಭಾವ
5. ಇಂದಿನ ದಿನಗಳಲ್ಲಿ ಪುರಾಣ ಪ್ರವಚನಗಳ ಪ್ರಸ್ತುತತೆ

ದಿನಾಂಕ:  29-12-2012 ಮತ್ತು 30-12-2012    ಧರ್ಮಶಾಸ್ತ್ರ

1. ಧರ್ಮಶಾಸ್ತ್ರಗಳ ವ್ಯಾಪ್ತಿ ಔಚಿತ್ಯ ಮತ್ತು ವಿಶ್ಲೇಷಣೆ
2. ಸ್ಮೃತಿ ಗ್ರಂಥಗಳು
3. ಶಾಸ್ತ್ರ ಗ್ರಂಥಗಳು
4. ಧರ್ಮಶಾಸ್ತ್ರೀಯ ಪರಿಭಾಷೆಗಳ ಪುನರ್ವ್ಯಾಖ್ಯಾನ
5. ಸಾಮಾಜಿಕ ವ್ಯವಸ್ಥೆಗೆ ಧರ್ಮಶಾಸ್ತ್ರಗಳ ಕೊಡುಗೆ

ದಿನಾಂಕ  05-01-2012 ಮತ್ತು 06-01-2012     ವೇದಾಂತ

1. ವೇದಾಂತ ದರ್ಶನದ ಸಂಕ್ಷಿಪ್ತ ಪರಿಚಯ
2. ಆಧುನಿಕ ಯುಗದಲ್ಲಿ ವೇದಾಂತದ ಪ್ರಸ್ತುತತೆ / ಸುಖೀ ಜೀವನಕ್ಕೆ ವೇದಾಂತ ದರ್ಶನದ ಕೊಡುಗೆ
3. ವೇದಾಂತ ದರ್ಶನದ ವೈವಿಧ್ಯತೆಗಳು / ವಿಭಾಗಗಳು
4. ವಿವಿಧ ದರ್ಶನಗಳಲ್ಲಿ ಆತ್ಮ ವಿಚಾರ
5. ಶಾಂಕರ ವೇದಾಂತದ ಮಹತ್ವ ಮತ್ತು ವೈಶಿಷ್ಟ್ಯತೆ

Highslide for Wordpress Plugin