ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ದಿನಾಂಕ ೧೧.೦೯.೨೦೧೨ರಂದು ಶ್ರೀ ಭಾರತೀ ಸಂಸ್ಕೃತೋತ್ಸವದ ಅಂಗವಾಗಿ ನಡೆದ ಮಂಗಳೂರು ವಿಶ್ವವಿದ್ಯಾಲಯಸ್ತರೀಯ ಅಂತರ-ಕಾಲೇಜು ಸ್ಪರ್ಧೆಗಳ ಸಮಗ್ರ ಪ್ರಶಸ್ತಿಯನ್ನು ಕುಂದಾಪುರದ ಭಂಡಾರ್ಕಸ್ ಕಾಲೇಜು ೨೮೯ ಅಂಕಗಳೊಂದಿಗೆ ಪಡೆದುಕೊಂಡಿತು. ರನ್ನರ್ ಅಪ್ ಪ್ರಶಸ್ತಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜು ೨೭೩ ಅಂಕಗಳೊಂದಿಗೆ ಪಡೆದುಕೊಂಡಿತು.
ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ
ಸಂಸ್ಕೃತ ಭಾಷಣ ಸ್ಪರ್ಧೆ
ಪ್ರಥಮ: ವಿಘ್ನೇಶ್ ಶರ್ಮ, ಪೂರ್ಣಪ್ರಜ್ಞ ಸಂಜೆ ಕಾಲೇಜು, ಉಡುಪಿ
ದ್ವಿತೀಯ: ಸ್ವಾತಿ ಎಸ್ ಉಪಾಧ್ಯಾಯ, ಪೂರ್ಣಪ್ರಜ್ಞ ಕಾಲೇಜು, ಉಡುಪಿ
ತೃತೀಯ: ದಿವ್ಯಾ ಅಡಿಗ, ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಕುಂದಾಪುರ
ಸಂಸ್ಕೃತ ರಸಪ್ರಶ್ನೆ
ಪ್ರಥಮ: ಶಂಕರನಾರಾಯಣ ಉಪಾಧ್ಯಾಯ ಮತ್ತು ಸುಮಂಗಲ ಭಂಡಾರ್ಕರ್ಸ್ ಕಾಲೇಜು, ಕುಂದಾಪುರ
ದ್ವಿತೀಯ: ಅಶ್ವಿನಿ ಎಂ ಮತ್ತು ಅಖಿಲಶ್ರೀ. ಕೆ, ವಿವೇಕಾನಂದ ಕಾಲೇಜು, ಪುತ್ತೂರು
ತೃತೀಯ: ಕಾರ್ತಿಕ್ ಪೈ ಮತ್ತು ಆರತಿ, ಆಳ್ವಾಸ್ ಕಾಲೇಜು, ಮೂಡಬಿದ್ರಿ
ಸಂಸ್ಕೃತ ಶ್ಲೋಕ ಅಂತ್ಯಾಕ್ಷರಿ
ಪ್ರಥಮ: ಸುಮಂಗಲ ಮತ್ತು ದಿವ್ಯಾ ಅಡಿಗ, ಭಂಡಾರ್ಕರ್ಸ್ ಕಾಲೇಜು, ಕುಂದಾಪುರ
ದ್ವಿತೀಯ: ಪ್ರಸನ್ನ ಕುಮಾರಿ ಮತ್ತು ಮಧುರಾ ಕೆ, ವಿವೇಕಾನಂದ ಕಾಲೇಜು, ಪುತ್ತೂರು
ತೃತೀಯ: ಶುಭಾ ಹೆಗ್ಡೆ ಮತ್ತು ಕೃತಿ ಹೆಚ್.ಕೆ, ಆಳ್ವಾಸ್ ಕಾಲೇಜು, ಮೂಡಬಿದ್ರಿ
ಸಂಸ್ಕೃತ ಪ್ರಹಸನ
ಪ್ರಥಮ: ವಾಸವಿ ಕುಂಬ್ಲೇಕರ್ ಮತ್ತು ತಂಡ, ಸಂತ ಅಲೋಶಿಯಸ್ ಕಾಲೇಜು, ಮಂಗಳೂರು
ದ್ವಿತೀಯ: ಅಶ್ವಿನಿ ಮತ್ತು ತಂಡ, ವಿವೇಕಾನಂದ ಕಾಲೇಜು, ಪುತ್ತೂರು
ತೃತೀಯ: ಅನಂತ ಮತ್ತು ತಂಡ, ಆಳ್ವಾಸ್ ಕಾಲೇಜು, ಮೂಡಬಿದ್ರಿ
ಸಂಸ್ಕೃತೋತ್ಸವ ಕಾರ್ಯಕ್ರಮವು ಬೆಳಿಗ್ಗೆ ೯.೩೦ಕ್ಕೆ ಶ್ರೀಮತಿ ಸಾವಿತ್ರಿ ಎಮ್ ಮುಳಿಯ ಮತ್ತು ಶ್ರೀ ಮಹಾಬಲ ಭಟ್ ಮುಳಿಯ ಇವರಿಂದ ಉದ್ಘಾಟಿಸಲ್ಪಟ್ಟಿತು. ನಂತರ ವಿವಿಧ ಸ್ಪರ್ಧೆಗಳು ನಡೆದವು. ಸಂಜೆ ೪.೦೦ ಗಂಟೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಭಾರತೀ ಸಮೂಹ ಶಿಕ್ಷಣ ಸಂಸ್ಥೆಗಳ ಜೊತೆ-ಕಾರ್ಯದರ್ಶಿಗಳಾದ ಶ್ರೀ. ಕೆ. ಬಾಲಕೃಷ್ಣ ಭಟ್ ಇವರು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ.ವೈವಿ ಭಟ್ ಮತ್ತು ಶ್ರೀ ಭಾರತೀ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎನ್ ಭಟ್ ಇವರು ಉಪಸ್ಥಿತರಿದ್ದರು. ಕುಮಾರಿ ಪ್ರಿಯಾ ಮತ್ತು ಹೇಮಲತಾ ಇವರ ಪ್ರಾರ್ಥನೆಯೊಂದಿಗೆ ಸಮಾರೋಪ ಸಮಾರಂಭವು ಆರಂಭವಾಯಿತು. ವಿದ್ಯಾರ್ಥಿ ವಿಕಾಸ್ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ವಿದ್ಯಾರ್ಥಿನಿ ಹೇಮಲತಾ ವಂದಿಸಿದರು. ಶ್ರೀ ಭಾರತೀ ಸಂಸ್ಕೃತೋತ್ಸವದ ಸಂಚಾಲಕರಾದ ಡಾ. ಈಶ್ವರಪ್ರಸಾದ ಎ ಇವರು ಕಾರ್ಯಕ್ರಮ ನಿರೂಪಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.