ನಾವು ಮರ ಬೆಳೆಸಿದರೆ ಅದು ನಮಗೂ ಮತ್ತು ನಂತರದ ಪೀಳಿಗೆಗೂ ಸಹಾಯಕಾರಿ. ಮರಗಳಿಂದ ವಾತಾವರಣವಲ್ಲದೆ ನಮ್ಮ ದೇಹದ ಆರೋಗ್ಯವು ಉತ್ತಮವಾಗಿರಲು ಸಾಧ್ಯ. ಆದ್ದರಿಂದ ಗಿಡ ನೆಟ್ಟು ನಾಡು ಬೆಳೆಸಿ ಎಂದು ಮಂಗಳೂರು ಪ್ರಾಂತ್ಯದ ರೇಂಜ್ ಫಾರೆಸ್ಟ್ ಆಫೀಸರ್ ಕ್ಲಿಫರ್ಡ್ ಲೋಬೋ ದಿನಾಂಕ ೧೪.೦೭.೨೦೧೨ರಂದು ಶ್ರೀ ಭಾರತೀ ಕಾಲೇಜಿನ ವನಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಪ್ರಾಂಶುಪಾಲ ಡಾ. ಜಿ.ಎನ್.ಭಟ್ ಮಾತನಾಡಿ ನಾವು ಇಂದು ನೆಡುವ ಗಿಡ ಮುಂದಿನ ಪೀಳಿಗೆಗೆ ಒಂದು ಕೊಡುಗೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಲೇಜು ಪ್ರಾಂಗಣದಲ್ಲಿ ವಿವಿಧ ತರದ ಸಸ್ಯಗಳನ್ನು ವಿದ್ಯಾರ್ಥಿಗಳು ನೆಟ್ಟು ಇದರ ಜವಾಬ್ದಾರಿಯನ್ನು ವಿದ್ಯಾರ್ಥಿಗಳೇ ವಹಿಸಿಕೊಂಡು ಇತರರಿಗೆ ಮಾದರಿಯಾಗಬೇಕೆಂದು ತಿಳಿಸಿದರು.
ಶ್ರೀಮತಿ ರೂಪಾ ಡಿ. ಬಂಗೇರಾ ಮತ್ತು ಇಘ್ನೇಷಿಯಸ್ ಎಸ್.ನೇವಿಲ್ ನೊರೊನ್ನಾ ಇವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಲ್ಲಾ ವಿದ್ಯಾರ್ಥಿಗಳು ಗಿಡವನ್ನು ನೆಡುವ ಮೂಲಕ ವನಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.