ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಬೆಳೆಸಿ ಈಗಿನ ಜನಾಂಗಕ್ಕೆ ಮಾದರಿಯಾಗಬೇಕೆಂದು ಕೆನರಾ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಶ್ರೀ ಇಘ್ನೇಷಿಯಸ್ ನೇವಿಲ್ ನೊರೊನ್ನಾ ಕರೆ ನೀಡಿದರು. ಇವರು ಶ್ರೀ ಭಾರತೀ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ೨೦೧೨-೧೩ರ ಉದ್ಘಾಟನೆಯನ್ನು ದಿನಾಂಕ ೧೪.೦೭.೨೦೧೨ರಂದು ನೆರವೇರಿಸಿ ಮಾತನಾಡಿದರು.
ಮಂಗಳೂರು ನಗರ ಪಾಲಿಕೆಯ ಕಾರ್ಪೊರೇಟರ್ ಶ್ರೀಮತಿ ರೂಪಾ ಡಿ.ಬಂಗೇರಾ ಮಾತನಾಡಿ ವಿದ್ಯಾರ್ಥಿಗಳೆಲ್ಲರೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ತಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕಾಲೇಜು ಪ್ರಾಂಶುಪಾಲ ಡಾ.ಜಿ.ಎನ್.ಭಟ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ನಾಯಕಿ ಹೇಮಲತಾ ಸ್ವಾಗತಿಸಿ, ಮಣಿಕಂಠ ವಂದಿಸಿದರು. ಪ್ರಾಧ್ಯಾಪಕರಾದ ಕುಮಾರಿ ಶ್ವೇತಾ ಹಾಗೂ ಅನಂತ ನಾರಾಯಣ ಪದಕಣ್ಣಾಯ ಉಪಸ್ಥಿತರಿದ್ದರು.