ಸಾವಿಷ್ಕಾರ್ — 2024 ವಾರ್ಷಿಕೋತ್ಸವ ಸಮಾರಂಭ

ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸಾವಿಷ್ಕಾರ್ — 2024 ವಾರ್ಷಿಕೋತ್ಸವ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ ಮಂಗಳೂರಿನ ಕಾಕುಂಜೆ ಗ್ರೂಪ್ಸ್ ಆಫ್ ಕಂಪೆನೀಸ್ ಇದರ ನಿರ್ದೇಶಕರಾದ ಶ್ರೀ ಮಿಥುನ್ ಭಟ್ ಕಾಕುಂಜೆ ಇವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ನಾವು ಯಾರನ್ನಾದರೂ ಮಾದರಿಯನ್ನಾಗಿ ತೆಗೆದುಕೊಂಡಾಗ ನಮ್ಮ ಜೀವನದಲ್ಲಿ ಗುರಿಯನ್ನು ಸಾಧಿಸಲು ಸುಲಭವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಗಳೂರಿನ ಶ್ರೀಶ ಸೌಹಾರ್ದ ಸೊಸೈಟಿಯ ಅಧ್ಯಕ್ಷರಾದ ಶ್ರೀ ಎಮ್. ಎಸ್ ಗುರುರಾಜ್ ಅವರು ಮಾತನಾಡುತ್ತಾ, ಸಂಸ್ಥೆಯು ಅತ್ಯುತ್ತಮ ಸೌಲಭ್ಯ‌ಗಳನ್ನು ಹೊಂದಿದೆ. ಇಲ್ಲಿರುವ ಮಕ್ಕಳ  ಹೆತ್ತವರು ಭಾಗ್ಯವಂತರು.ಈ ಸೌಲಭ್ಯಗಳನ್ನು ಇನ್ನಷ್ಟು ವಿದ್ಯಾರ್ಥಿಗಳು ಬಳಸಿಕೊಳ್ಳುವಂತಾಗಬೇಕು ಎಂದರು.

ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ರಾಜಗೋಪಾಲ್ ಅವರು ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶನವನ್ನು ನೀಡುವ ಸಂಸ್ಥೆಯಾಗಿದೆ. ಇದು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀಕೃಷ್ಣ ನೀರಮೂಲೆ ಅವರು ಮಾತನಾಡಿ ವಾರ್ಷಿಕೋತ್ಸವವು  ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪ್ರತಿಭೆಯು ಅನಾವರಣಗೊಳ್ಳುವ ಒಂದು ಸುಸಂದರ್ಭ ಎಂದರು.

ಸಂಸ್ಥೆಯ ನಿರ್ದೇಶಕರಾದ ಗಿರೀಶ್ ಎಮ್. ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರಾಂಶುಪಾಲರಾದ ಗಂಗಾರತ್ನ ಸಂಸ್ಥೆಯ ವಾರ್ಷಿಕ ವರದಿ ಮಂಥನ ವನ್ನು ವಾಚಿಸಿದರು.

ಸೇವಾಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಗಣೇಶ್ ಮೋಹನ್ ಕಾಶಿಮಠ ಮತ್ತು ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ರೀಮತಿ ದುರ್ಗಾವತಿ  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದರೊಂದಿಗೆ  ಅರ್ಹ ವಿದ್ಯಾರ್ಥಿಗಳಿಗೆ ದತ್ತಿನಿಧಿ ಸಹಾಯಧನದ ಸೌಲಭ್ಯವನ್ನೂ ನೀಡಲಾಯಿತು.

ಉಪನ್ಯಾಸಕಿ ವೀಣಾ ಸ್ವಾಗತಿಸಿ, ನಿತಿನ್ ಕುಮಾರ್ ವಂದಿಸಿದರು. ರೋಷನ್ ಕುಮಾರ್, ಗಾಯತ್ರೀ ಶ್ರೀನಿವಾಸ್, ಸಂಗೀತಾ ಅತಿಥಿಗಳ ಪರಿಚಯ ಮಾಡಿದರು.

ವಿದ್ಯಾರ್ಥಿಗಳಿಗೆ ನಡೆಸಿದ ವೈವಿಧ್ಯಮಯ ಸ್ಪರ್ಧೆಗಳಲ್ಲಿ  ವಿಜೇತರಾದವರ ಪಟ್ಟಿಗಳನ್ನು ಉಪನ್ಯಾಸಕಿಯರಾದ ಅಕ್ಷತಾ,ಸ್ವಾತಿ,ಶ್ರುತಿ ,ಸಮೃದ್ಧಿ ವಾಚಿಸಿ, ಮೇಘನಾ ಗಾಯತ್ರೀ ಎನ್. ಎಸ್, ಶೋಭಾ ನಿರ್ವಹಿಸಿದರು.

ಉಪನ್ಯಾಸಕರಾದ ಕಾರ್ತಿಕ್ ಕೃಷ್ಣ ಮತ್ತು ಸೌಮ್ಯಾ ಶೆಟ್ಟಿ ನಿರೂಪಣೆ ಗೈದರು.

ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Highslide for Wordpress Plugin