ಶ್ರೀ ಭಾರತೀ ಸಮೂಹ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ

ಮಂಗಳೂರು ನಂತೂರಿನ  ಶ್ರೀ ಭಾರತೀ ಸಮೂಹ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಇಂದು ಅತ್ಯಂತ ಸುಂದರವಾಗಿ ನೆರವೇರಿತು.

ಆರಂಭದಲ್ಲಿ ವಿದ್ಯಾರ್ಥಿಗಳು ಪಥಸಂಚಲನದ ಮೂಲಕ ಗಣ್ಯರಿಗೆ ಅಭಿವಂದನೆ ಸಲ್ಲಿಸಿದರು.

ಕ್ರೀಡಾ ಜ್ಯೋತಿಯ ಆಗಮನದ ನಂತರ ಸಮಾರಂಭದ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಬಾಲಕೃಷ್ಣ .ಎಂ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಪೂರಕವಾಗಿದೆ,ಬಹುಮಾನಕ್ಕಿಂತ ವಿದ್ಯಾರ್ಥಿಗಳ ಭಾಗವಹಿಸುವಿಕೆ ಮುಖ್ಯ ಎನ್ನುತ್ತಾ ವಿದ್ಯಾರ್ಥಿಗಳನ್ನು  ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸೇವಾಸಮಿತಿಯ ಕಾರ್ಯದರ್ಶಿಗಳಾದ

ಶ್ರೀ ಶ್ರೀಕೃಷ್ಣ ನೀರಮೂಲೆ ಅವರು ಮಾತನಾಡಿ ನಮ್ಮ ವಿದ್ಯಾರ್ಥಿಗಳ ಶಿಸ್ತು ಮೆಚ್ಚುಗೆಯಾಯಿತು, ಕ್ರೀಡೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.

ಪ್ರಾಂಶುಪಾಲರಾದ ಗಂಗಾರತ್ನ ಶುಭಹಾರೈಸಿದರು.

ನಂತರ ಮುಖ್ಯ ಅತಿಥಿಗಳು ಪಥಸಂಚಲನದಲ್ಲಿ ಉತ್ತಮ ನಿರ್ವಹಣೆ ಗೈದ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು.

ಶಿಕ್ಷಕಿ ಸಮೃದ್ದಿ ಅತಿಥಿಗಳನ್ನು ಪರಿಚಯಿಸಿದರು.

ಉಪನ್ಯಾಸಕಿಯರಾದ ವೀಣಾ ಸ್ವಾಗತಿಸಿ ,ಶೋಭಾ ವಂದಿಸಿದರು.ಗಾಯತ್ರೀ ಶ್ರೀನಿವಾಸ್ ಮತ್ತು ಮಲ್ಲಿಕಾ ಸಂತೋಷ್ ಪಥಸಂಚಲನ ಹಾಗೂ ಬಹುಮಾನ ವಿತರಣೆ ನಿರ್ವಹಿಸಿದರು. ಕಾರ್ತಿಕ್‌ಕೃಷ್ಣ ನಿರೂಪಿಸಿದರು.

Highslide for Wordpress Plugin
Loading...