ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ವಿವಿಧ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮ

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದಗಳೊಂದಿಗೆ  ಮಂಗಳೂರು ನಂತೂರು, ಪದವು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಪ್ರತೀ ವರ್ಷದಂತೆ ನವರಾತ್ರಿಯಲ್ಲಿ ದುರ್ಗಾಪೂಜೆ, ಸಪ್ತಶತೀ ಪಾರಾಯಣ, ಶ್ರೀ ಸರಸ್ವತೀ ಪೂಜೆ ಮತ್ತು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಕ್ಟೋಬರ್ 5ರಂದು ಶನಿವಾರ ಸಂಜೆ ದುರ್ಗಾಪೂಜೆ, ಸಪ್ತಶತೀ ಪಾರಾಯಣ, ಸರಸ್ವತೀಪೂಜೆ ನಡೆಯಿತು. ಸ್ವರ್ಣಪಾದುಕಾಪೂಜಾ ಮಹತ್ವದ ಬಗ್ಗೆ ಹೊನ್ನಾವರ ಶ್ರೀ ರಾಘವೇಂದ್ರ ಭಾರತೀ ಸಂಸ್ಕೃತ ಕಾಲೇಜು ಪ್ರಾಧ್ಯಾಪಕ ಡಾ.ಕೇಶವಕಿರಣ ಭಟ್ ಬಾಕಿಲ ಪದವು ಸಮಗ್ರ ಮಾಹಿತಿ ನೀಡಿದರು. ಮಂಗಳೂರು ಹವ್ಯಕ ಮಂಡಲ, ವಿವಿವಿ ಮತ್ತು ವಲಯಗಳ ಪದಾಧಿಕಾರಿಗಳು, ಗುರಿಕ್ಕಾರರು ಉಪಸ್ಥಿತರಿದ್ದರು.

ಅಕ್ಟೋಬರ್ 6ರಂದು ಆದಿತ್ಯವಾರ ಬಾಲಗಣಪತಿ ಹವನ, 12 ತೆಂಗಿನಕಾಯಿ ಗಣಪತಿ ಹೋಮ, ನವಕ ಕಲಶಾಭಿಷೇಕಪೂರ್ವಕ ನಾಗತಂಬಲ, ಸದ್ಗುರು ಶ್ರೀಧರ ಕಲ್ಪೋಕ್ತಪೂಜೆ, ಸ್ವಾಮೀ ಶ್ರೀ ಸದಾನಂದ ಸರಸ್ವತೀ ಸನ್ನಿಧಿಯಲ್ಲಿ ಪೂಜೆ, ಅಶ್ವತ್ಥ ಪೂಜೆ, ಗೋಪೂಜೆ ನೆರವೇರಿಸಲಾಯಿತು.

Highslide for Wordpress Plugin