ಶ್ರೀ ಭಾರತೀ ಪದವಿಪೂರ್ವ ಹಾಗೂ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ  ವಿದ್ಯಾರ್ಥಿಗಳಿಂದ ಗುರುಪೂರ್ಣಿಮಾ ಕಾರ್ಯಕ್ರಮ

ಮಂಗಳೂರು, ನಂತೂರು ಶ್ರೀ ಭಾರತೀ ಪದವಿಪೂರ್ವ ಹಾಗೂ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ  ವಿದ್ಯಾರ್ಥಿಗಳಿಂದ ಗುರುಪೂರ್ಣಿಮಾ ಕಾರ್ಯಕ್ರಮ ಆಚರಿಸಲಾಯಿತು.

ದಿನಾಂಕ 10/7/2025 ನೇ ಗುರುವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ   ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಪಾದ ಪೂಜೆ ಮಾಡುವುದರ ಮೂಲಕ ಗುರು ಪೂರ್ಣಿಮಾ ಆಚರಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ  ಭಾರತೀ ಸೇವಾ ಸಮಿತಿಯ ಕಾರ್ಯಾಲಯ ಕಾರ್ಯದರ್ಶಿಗಳಾದ ಶ್ರೀ ಎಂ.ಟಿ ಭಟ್ ಮಾತನಾಡಿ

ಶುಭ ದಿನವಾದ ಇಂದು ಶ್ರೀ ಮಠದಲ್ಲಿ ವಿಶೇಷವಾಗಿ ವ್ಯಾಸ ಪೂಜೆ ಮಾಡಲಾಗುವುದು ಎಂದರು.

ಉಪಸ್ಥಿತರಿದ್ದ ಸಂಸ್ಥೆಯ ನಿರ್ದೇಶಕರಾದ ಶ್ರೀ ಗಿರೀಶ್ ಎಂ. ಅವರು ಮಾತನಾಡಿ ಸನಾತನ ಧರ್ಮದ ಉಳಿವಿಗೆ ವಿದ್ಯಾರ್ಥಿಗಳಿಗೆ ಇಂತಹ ಸಂಸ್ಕಾರ ನೀಡುವುದು ಅಗತ್ಯ ಎಂದರು.

 ಸಂಸ್ಥೆಯ  ಪ್ರಾಂಶುಪಾಲರಾದ ಶ್ರೀ ಸಂದೀಪ್ ಆಚಾರ್ಯ ಮಾತನಾಡಿ ಪಾದ ಪೂಜೆಯ ಮಹತ್ವ ತಿಳಿಸಿದರು.

ಸಂಸ್ಥೆಯ ಉಪನ್ಯಾಸಕ, ಉಪನ್ಯಾಸಕಿಯರು ತಮ್ಮ ಮನದಾಳದ ಮಾತುಗಳನ್ನು ಆಡಿದರು.

ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.

Highslide for Wordpress Plugin