ಮಂಗಳೂರು ನಂತೂರು ಶ್ರೀ ಭಾರತಿ ಸಮೂಹ ಸಂಸ್ಥೆಗಳ ಶಿಕ್ಷಕ ರಕ್ಷಕ ಸಂಘದ ಸಭೆಯು ದಿನಾಂಕ:-09/07/2025ರ ಬುಧವಾರ ಮಧ್ಯಾಹ್ನ ಗಂಟೆ 01:30ಕ್ಕೆ ಶಂಕರಶ್ರೀ ಸಭಾಂಗಣದಲ್ಲಿ ಶ್ರೀ ಗಣೇಶ್ ಮೋಹನ್ ಕಾಶಿಮಠ, ಮಾನ್ಯ ಕಾರ್ಯಾಧ್ಯಕ್ಷರು, ಸೇವಾ ಸಮಿತಿ, ಶ್ರೀ ಭಾರತಿ ಸಮೂಹ ಸಂಸ್ಥೆಗಳು, ನಂತೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಿಕ್ಷಕ ರಕ್ಷಕ ಸಂಘದ ಸಭೆಯನ್ನು ಎಲ್ಲಾ ಗೌರವಾನ್ವಿತ ಅತಿಥಿಗಳು ಉದ್ಘಾಟಿಸಿದರು.
JEE, NEET & CET ಸಂಬಂಧಿಸಿದಂತೆ ನೂತನ ಶ್ರೀ ಭಾರತಿ ಅಕಾಡೆಮಿ ಆಫ್ ಲರ್ನಿಂಗ್ ಘಟಕವನ್ನು ಸಭಾ ಅಧ್ಯಕ್ಷರು ಮತ್ತು ಸಂಪನ್ಮೂಲ ವ್ಯಕ್ತಿಗಳು ಜಂಟಿಯಾಗಿ ಉದ್ಘಾಟಿಸಿದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಡಾ!ಪ್ರಮೀಳಾ ಶೇಖರ್, ಮಾನಸಿಕ ಆರೋಗ್ಯ ಸಮಾಲೋಚಕರು, ಮನಃಶಾಂತಿ, ಮಂಗಳೂರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು, ಮಕ್ಕಳ ಬೇಡಿಕೆಯನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸಬೇಕು ಮತ್ತು ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ವಿನಿಯೋಗಿಸಿ ಆತ್ಮೀಯತೆಯನ್ನು ಬೆಳೆಸುವ ಮೂಲಕ ಅವರ ವಿಧ್ಯಾಭ್ಯಾಸ ಕಡೆಗೂ ಗಮನ ಹರಿಸಬೇಕು ಎಂದು ಮನವರಿಕೆ ಮಾಡಿದರು.
ಶ್ರೀ ಉದಯಶಂಕರ್ ನೀರ್ಪಾಜೆ, ಮಾನ್ಯ ಕೋಶಾಧಿಕಾರಿಗಳು, ಸೇವಾ ಸಮಿತಿ, ಶ್ರೀ ಭಾರತಿ ಸಮೂಹ ಸಂಸ್ಥೆಗಳು, ನಂತೂರು ಅವರು ತಮ್ಮ ಸಂಸ್ಥೆಗಳ ಬಗ್ಗೆ ವಿಸ್ತೃತವಾಗಿ ಪೋಷಕರಿಗೆ ಮಾಹಿತಿಯನ್ನು ನೀಡಿದರು.
ಶ್ರೀ ಗಿರೀಶ್ ಎಂ. ಮಾನ್ಯ ನಿರ್ದೇಶಕರು, ಶ್ರೀ ಭಾರತಿ ಸಮೂಹ ಸಂಸ್ಥೆಗಳು, ನಂತೂರು ಅವರು ನಮ್ಮೊಂದಿಗೆ ಪೋಷಕರು ತಮ್ಮ ಮಕ್ಕಳ ವಿಧ್ಯಾಭ್ಯಾಸ ಬಗ್ಗೆ ಗಮನ ನೀಡಬೇಕು, ಈಗಾಗಲೇ ವಿಜ್ಞಾನ ವಿಭಾಗದ ಮಕ್ಕಳಿಗೆ JEE, NEET & CET ಕೋರ್ಸುಗಳನ್ನು ಅತೀ ಕಡಿಮೆ ವೆಚ್ಚದಲ್ಲಿ ನಡೆಸುತ್ತಿದ್ದೇವೆ ಮಾತ್ರವಲ್ಲದೇ ಕಾಮರ್ಸ್ ವಿಭಾಗದ ಮಕ್ಕಳಿಗೂ ಭವಿಷ್ಯದ ದೃಷ್ಟಿಯಿಂದ ಹಲವಾರು ಕೋರ್ಸುಗಳು ಇವೆ. ಈ ಬಗ್ಗೆ ಪೋಷಕರು ಬೇಡಿಕೆಯನ್ನು ಸಲ್ಲಿಸಿದರೆ ಕಡಿಮೆ ವೆಚ್ಚದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಮಾಡಬಹುದು ಎಂದು ತಿಳಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಸಂದೀಪ್ ಆಚಾರ್ಯ ಅವರು ಶಿಕ್ಷಕ ರಕ್ಷಕ ಸಂಘದ ಸಮಿತಿ ರಚನೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದ ಶ್ರೀ ರಾಜಗೋಪಾಲ್ ಜಿ. ಅವರು ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಈ ಶಿಕ್ಷಣ ಸಂಸ್ಥೆಗೆ ಪೋಷಕರಾದ ನಾವು ಸಂಪೂರ್ಣ ಸಹಕಾರವನ್ನು ನೀಡಬೇಕೆಂದು ಪೋಷಕರಿಗೆ ವಿನಂತಿ ಮಾಡಿದರು. ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಮತ್ತು ಸಮಿತಿ ಸದಸ್ಯರಿಗೆ ಸಭಾ ಅಧ್ಯಕ್ಷರು ಹೂ ನೀಡಿ ಅಭಿನಂದಿಸಿದರು.
ಶ್ರೀಮತಿ ಮಲ್ಲಿಕಾ ಸ್ವಾಗತಿಸಿದರು, ಶ್ರೀ ನಿತಿನ್ ಕುಮಾರ್ ವಂದಿಸಿದರು ಮತ್ತು ಕು. ಮೇಘನಾ ಆರ್. ಕಾರ್ಯಕ್ರಮ ನಿರೂಪಣೆ ಮಾಡಿದರು.




