ನಂತೂರು, ಜ.13 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿರುವ ಗೋವುಗಳಿಗಾಗಿ ಜನವರಿ13ರಿಂದ 15ರವರೆಗೆ ಹಮ್ಮಿಕೊಳ್ಳಲಾದ ಗೋದಿನಾಚರಣೆಗೆ ಜ.13ರಂದು ಚಾಲನೆ ನೀಡಲಾಯಿತು.
ಮಂಗಳೂರು ಮಾತೃತ್ವಮ್ ಅಧ್ಯಕ್ಷೆ ಸುಮಾ ರಮೇಶ್ ಚಾಲನೆ ನೀಡಿ, ದೇಸೀ ಗೋವುಗಳ ಬಗ್ಗೆ ಮಾಹಿತಿ ನೀಡಿದರು. ಮಹಾಮಂಡಲ ಮುಷ್ಟಿ ಅಕ್ಕಿ ಪ್ರಧಾನ ರಮೇಶ್ ಭಟ್ ಸರವು, ಸಂಸ್ಥೆಯ ಕೋ ಆರ್ಡಿನೇಟರ್ ಜಯಂತಿ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಸತೀಶ್ ಶಾಸ್ತ್ರಿ ಪ್ರಸ್ತಾಪಿಸಿದರು. ಉಪನ್ಯಾಸಕ ಕಾರ್ತಿಕ್ ಕೃಷ್ಣ ಸ್ವಾಗತಿಸಿ, ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರತಿಮ್ ಕುಮಾರ್ ಎಸ್. ಅವರು ವಂದಿಸಿದರು.
ಶ್ರೀರಾಮಚಂದ್ರಾಪುರಮಠದ ಪರಮಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಂಪೂರ್ಣ ಅನುಗ್ರಹ, ಕೃಪೆ ಮತ್ತು ಆಶೀರ್ವಾದಗಳೊಂದಿಗೆ ಸಂಸ್ಥೆಯ ಅಂಗಸಂಸ್ಥೆಯಲ್ಲಿ ಗೋಶಾಲೆ ಇರಬೇಕೆಂಬ ಆಶಯದಂತೆ ಶಾಲೆಯಲ್ಲಿ ಗೋಶಾಲೆ ನಿರ್ಮಿಸಲಾಗಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಶ್ರೀ ಸಂಸ್ಥಾನದವರ ಮಾರ್ಗದರ್ಶನದಲ್ಲಿ ಭಾನ್ಕುಳಿಯ ಗೋಸ್ವರ್ಗದಲ್ಲಿ ಜ.12ರಿಂದ 15ರವರೆಗೆ ಗೋದಿನ ನಡೆಯಲಿದ್ದು, ಅದೇ ದಿನಗಳಲ್ಲಿ ನಮ್ಮ ಸಂಸ್ಥೆಯಲ್ಲೂ ಪ್ರತೀ ವರ್ಷವೂ ಗೋದಿನ ಆಚರಿಸಲಾಗುತ್ತಿದೆ.
ಸಂಸ್ಥೆಯ ವಿದ್ಯಾರ್ಥಿಗಳು ದೇಸೀಗೋವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮತ್ತು ಹಣ್ಣು ಇತ್ಯಾದಿ ಆಹಾರ ವಸ್ತುಗಳನ್ನು ಗೋವಿಗೆ ನೀಡಿ ಸಂಭ್ರಮಿಸಿದರು