ಎನ್ಎಸ್ಎಸ್ ಚಟುವಟಿಕೆಗಳ ಉದ್ಘಾಟನೆ 2018-19
ಸುಬ್ಬಪ್ಪ ಕೈಕಂಬ : ಮನುಷ್ಯ ಬುದ್ಧಿವಂತನಾದರೆ ಸಾಲದು, ಹೃದಯವಂತನಾಗಬೇಕು
ನಂತೂರು, ಜು.26 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಪದವಿ ಕಾಲೇಜಿನಲ್ಲಿ ಗುರುವಾರ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ನೆರವೇರಿತು.
ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಅವರು ಉದ್ಘಾಟಿಸಿ, ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಇತರರನ್ನು ಬೆಳೆಸುವುದಕ್ಕಿಂತ ಹೆಚ್ಚಾಗಿ ತಾವು ಬೆಳೆಯುತ್ತಾರೆ. ಅವರು ಪರಿಸರವನ್ನು ಸ್ವಚ್ಛಗೊಳಿಸುವುದರೊಂದಿಗೆ ತಮ್ಮ ಮನಸ್ಸನ್ನೂ ಸ್ವಚ್ಛಗೊಳಿಸಿಕೊಳ್ಳಬೇಕು. ರಾ. ಸೇ.ಯೋಜನೆಯು ವಿದ್ಯಾರ್ಥಿಗಳನ್ನು ಹೃದಯವಂತರನ್ನಾಗಿಸುತ್ತದೆ. ಮನುಷ್ಯ ಬುದ್ಧಿವಂತನಾದರೆ ಸಾಲದು, ಹೃದಯವಂತನಾಗಬೇಕು ಎಂದರು.
ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ನಮ್ಮ ವಿದ್ಯಾರ್ಥಿಗಳು ರಾ.ಸೇ.ಯೋಜನೆಯ ಮೂಲಕ ತಾವು ಉತ್ತಮವ್ಯಕ್ತಿಗಳಾಗಿ ಬೆಳೆಯುವುದರೊಂದಿಗೆ ನಮ್ಮ ವಿದ್ಯಾಸಂಸ್ಥೆಗೂ ಒಳ್ಳೆಯ ಹೆಸರನ್ನು ತಂದಿದ್ದಾರೆ ಎಂದರು.